Skip to main content




ಸರಕಾರಿ ಪ್ರಥಮ ದರ್ಜೆ ಕಾಲೇಜು, ಸುಳ್ಯದ ಹಿಂದಿ ವಿಭಾಗವು ಕಾಲೇಜಿನ IQAC ಸಹಯೋಗದೊಂದಿಗೆ ಪ್ರಾರಂಭಿಸಲಿರುವ   21 ದಿನಗಳ ‘ಉಚಿತ ಆನ್ ಲೈನ್  ಹಿಂದಿ ತರಬೇತಿ ಕಾರ್ಯಕ್ರಮ’ಕ್ಕೆ  ತಮಗೆಲ್ಲರಿಗೂ ಪ್ರೀತಿ ಪೂರ್ವಕ ಸ್ವಾಗತ. 21 ದಿನಗಳಲ್ಲಿ ಹಿಂದಿ ಕಲಿಯುವ ಸುವರ್ಣಾವಕಾಶ ಇದಾಗಿದ್ದು, ನೋಂದಣಿ ಸಂಪೂರ್ಣ ಉಚಿತವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಭಾರತದ ವಿವಿಧ ರಾಜ್ಯಗಳಲ್ಲಿ ನೌಕರಿ ಪಡೆಯುವಲ್ಲಿ ಈ ಕಲಿಕೆ  ಸಹಕಾರಿಯಾಗಲಿದೆ.   ನೀವು ಹೆಸರು ನೋಂದಾಯಿಸಿಕೊಳ್ಳಿ ಹಾಗೆಯೇ ನಿಮ್ಮ ವಿದ್ಯಾರ್ಥಿಗಳು, ಸ್ನೇಹಿತರಿಗೆ ಈ ವಿಚಾರವನ್ನು ತಿಳಿಸಿ.
ತರಬೇತಿ ನಡೆಯುವ ವಿಧಾನ: ದಿನಾಂಕ 14-05-2020 ರಿಂದ ಪ್ರತಿ ದಿನ ಹಿಂದಿ ಕಲಿಕೆಗೆ ಸಂಬಂಧಿಸಿದ ವೀಡಿಯೋಗಳ ಲಿಂಕ್ ಗಳನ್ನು ನೋಂದಾಯಿಸಿದ  e- mail ID ಗೆ  ಕಳುಹಿಸಿಕೊಡಲಾಗುವುದು. ಅದರೊಂದಿಗೆ ಆ ದಿನದ ವೀಡಿಯೋಗೆ ಸಂಬಂಧಿಸಿದಂತೆ 10 ವಸ್ತು ನಿಷ್ಠ ಮಾದರಿಯ  (  multiple choice questions) ಪ್ರಶ್ನೆಗಳನ್ನು ಕೇಳಲಾಗುವುದು. ಅದೇ ದಿನ  ಸಂಬಂಧಿಸಿದ ಗೂಗಲ್ ಫಾರ್ಮ್ ತುಂಬುವ ಮೂಲಕ ಪ್ರತಿ ದಿನದ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗಿರುತ್ತದೆ.


e- ಪ್ರಮಾಣ ಪತ್ರ :

ಶೇಕಡ 75 ಕ್ಕಿಂತ ಹೆಚ್ಚು ಅಂಕ  -            ಅತ್ಯುನ್ನತ ಶ್ರೇಣಿ,
ಶೇಕಡ 60 ರಿಂದ 75 ರ  ಒಳಗೆ -            A ಶ್ರೇಣಿ,
ಶೇಕಡ 50 ರಿಂದ 60 ರ ಒಳಗೆ  -           B ಶ್ರೇಣಿ     
ಶೇಕಡ 30 ರಿಂದ 50 ರ ಒಳಗೆ  -              participation certificate. 
 .

ಹಿಂದಿ ತರಬೇತಿ ಕಾರ್ಯಕ್ರಮದ ಅವಧಿ: 14-05-2020 ರಿಂದ 03-06-2020


ನೋಂದಾಯಿಸಿಕೊಳ್ಳಲು ಅಂತಿಮ ದಿನಾಂಕ 13-05-2020 ರ ಸಾಯಂಕಾಲ 5-00 ಗಂಟೆಯವರೆಗೆ

Comments

Post a Comment